ರಿದಂ - ಮಂಜು ಮೂವೀಸ್‌ನ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗಿರುವ ಮುಂಬರುವ ಪ್ರೇಮ ಕಥಾನಕ, ಆಕ್ಷನ್ ಮತ್ತು ಕೌಟುಂಬಿಕ ಕನ್ನಡ ಚಲನಚಿತ್ರ. ಮಂಜು ಮಿಲನ್ ಈ ಚಿತ್ರಕ್ಕೆ ನಾಯಕ ನಟನಾಗಿ ನಿರ್ದೇಶಿಸಿದ್ದಾರೆ. ಮೇಘಶ್ರೀ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು ದೊಡ್ಡ ತಾರಾಬಳಗವನ್ನು ಹೊಂದಿದೆ, ತೆಲುಗು ನಟ ಸುಮನ್ ನಾಯಕಿಯ ತಂದೆಯ ಪಾತ್ರದಲ್ಲಿ ವಿನಯಾ ಪ್ರಸಾದ್ ಮುಖ್ಯ ಪಾತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ, ಮಹೇಶ್ ಮಹದೇವ್ ಈ ಚಿತ್ರದಲ್ಲಿ ಸಂಗೀತ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಹಿರಿಯ ಕಲಾವಿದರಾದ ಶಿವರಾಂ, ಭವ್ಯ, ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಶ್ರೀನಿವಾಸ ಮೂರ್ತಿ, ಪದ್ಮಾವಾಸಂತಿ, ಮಿಮಿಕ್ರಿ ದಯಾನಂದ್, ಶ್ರೀನಾಥ್ ವಶಿಷ್ಟ, ಮಹೇಶ್, ಜಗದೀಶ್, ರವಿ ಮುಂತಾದವರು ನಟಿಸಿದ್ದಾರೆ. == ಪಾತ್ರವರ್ಗ == ಮಂಜು ಮಿಲನ್ ಮೇಘಶ್ರೀ ಸುಮನ್ ವಿನಯಾ ಪ್ರಸಾದ್ ಗಿರಿಜಾ ಲೋಕೇಶ್ ಮುಖ್ಯಮಂತ್ರಿ ಚಂದ್ರು ಮಹೇಶ್ ಮಹದೇವ್ ಶ್ರೀನಿವಾಸ ಮೂರ್ತಿ ಪದ್ಮಾವಾಸಂತಿ ಶಿವರಾಂ ಶ್ರೀನಾಥ್ ವಶಿಷ್ಟ ಜಗದೀಶ್ ಮಹೇಶ್ ಮಿಮಿಕ್ರಿ ದಯಾನಂದ್ == ನಿರ್ಮಾಣ == ಮಂಜು ಮೂವೀಸ್‌ನ ಬ್ಯಾನರ್‌ನಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಸಿಂಗಾಪುರ, ಬೆಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. == ಬಿಡುಗಡೆ == ಸೆನ್ಸಾರ್ ಮುಗಿಸಿ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. == ಹಿನ್ನೆಲೆಸಂಗೀತ == ಈ ಚಿತ್ರಕ್ಕೆ ಎ. ಟಿ. ರವೀಶ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಎಲ್ಲಾ ಹಾಡುಗಳ ಸಾಹಿತ್ಯವನ್ನು ಮಂಜುಮಿಲನ್ ಬರೆದಿದ್ದಾರೆ. ಈ ಚಿತ್ರದ ಗೀತೆಗಳು ಆನಂದ್ ಆಡಿಯೋದಲ್ಲಿ ಬಿಡುಗಡೆಯಾಗಿದೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ರಿದಂ @ ಐ ಎಮ್ ಡಿ ಬಿ